ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾ ಗೌಡಗೆ ಜಗನ್ ಕಂಡ್ರೆ ಅಷ್ಟಕ್ಕಷ್ಟೇ | Filmibeat Kannada

2017-11-09 5

ಹಳೇ ಬಾಯ್ ಫ್ರೆಂಡ್ ಜಗನ್ ಕಂಡ್ರೆ ಅನುಪಮಾಗೆ ಅಷ್ಟಕಷ್ಟೆ.! ಯಾಕೆ.? ಧಾರಾವಾಹಿಗಳಲ್ಲಿ ಅಭಿನಯಿಸುತ್ತಿರುವ ಜಗನ್ ಹಾಗೂ ಅನುಪಮಾ ಮಾಜಿ ಲವರ್ಸ್. ಒಂದ್ಕಾಲದಲ್ಲಿ ಪ್ರೇಮಿಗಳಾಗಿದ್ದವರು ಎರಡು ವರ್ಷಗಳ ಹಿಂದೆ ಬ್ರೇಕಪ್ ಮಾಡಿಕೊಂಡರು. ಎರಡು ವರ್ಷಗಳಿಂದ ಸೀರಿಯಲ್ ಗಳಲ್ಲಿ ಹೆಚ್ಚಾಗಿ ತೊಡಗಿರುವ ಹಳೇ ಪ್ರಣಯ ಪಕ್ಷಿಗಳು ಇದೀಗ 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗಿವೆ. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ, ಜಗನ್ ಹಾಗೂ ಅನುಪಮಾ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಜಗನ್ ಕಂಡ್ರೆ ಅನುಪಮಾಗೆ ಕಿರಿಕಿರಿ ಆಗುತ್ತಿದೆ. ಹೀಗ್ಯಾಕೆ.? ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.ಜಗನ್, ಆಶಿತಾ, ಕೃಷಿ, ಅನುಪಮಾ 'ಟ್ರೂತ್/ಡೇರ್' ಆಟ ಆಡುತ್ತಿದ್ದರು. ಇದೇ ಆಟದಲ್ಲಿ ನಟಿ ಅನುಪಮಾ ಗೌಡ ಒಂದು ಸತ್ಯವನ್ನ ಹೊರಗೆ ಹಾಕಿದರು.ನಟಿ ಅನುಪಮಾ ಗೌಡ ಸರದಿ ಬಂದಾಗ, ಆಕೆಗೆ ನಟಿ ಆಶಿತಾ ಒಂದು ಡೇರ್ ಕೊಟ್ಟರು. ''ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ, ನಿಮಗೆ ಜಗನ್ ಬಗ್ಗೆ ಕಿರಿಕಿರಿ ಎನಿಸಿದ ಒಂದು ವಿಷಯ ಹೇಳಬೇಕು'' ಎಂಬ ಡೇರ್ ನ ಅನುಪಮಾಗೆ ಆಶಿತಾ ನೀಡಿದರು.
Bigg Boss Kannada 5: Week 4: Why is Anupama irritated with Jagan? Anupama Gowda has started ignoring Jagan.

Videos similaires